ಶನಿವಾರ, ಅಕ್ಟೋಬರ್ 24, 2015

ಯುದ್ಧ ವಿಮಾನಗಳಲ್ಲಿ ಮಹಿಳಾ ಪೈಲಟ್‌ ನೇಮಕ:ಸರ್ಕಾರದ ಅಸ್ತು .


ನವದೆಹಲಿ : ಯುದ್ಧ ವಿಮಾನಗಳಲ್ಲಿ  ಮಹಿಳಾ ಪೈಲಟ್‌ಗಳನ್ನು ನೇಮಕ ಮಾಡುವ ಬಗ್ಗೆ ಭಾರತೀಯ ವಾಯುಪಡೆಯ ಪ್ರಸ್ತಾವನೆಗೆ ಕೇಂದ್ರ ರಕ್ಷಣಾ ಇಲಾಖೆ ಶನಿವಾರ ಒಪ್ಪಿಗೆ ನೀಡಿದೆ.
ಮಹಿಳಾ ಫೈಟರ್‌ಗಳನ್ನು ನೇಮಕ ಮಾಡಲು ಕೋರಿ  ರಕ್ಷಣಾ ಸಚಿವಾಲಯಕ್ಕೆ  ಸಲ್ಲಿಸಲಾಗಿದ್ದ ಪ್ರಸ್ತಾವನಗೆ ಇದೀಗ  ಒಪ್ಪಿಗೆ ಸಿಕ್ಕಿರುವುದರಿಂದ ಯುದ್ಧ ವಿಮಾನಗಳಲ್ಲಿ ಪೈಲಟ್‌ ಆಗಿ ಕರ್ತವ್ಯ ನಿರ್ವಹಿಸುವ ಮಹಿಳಾ ಪೈಲಟ್‌ಗಳ ಬಹುವರ್ಷಗಳ ಕನಸು ನನಸಾಗಿದೆ.
ಭಾರತೀಯ ವಾಯುಪಡೆ 83ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಂದು   ವಾಯುಪಡೆ ಮುಖ್ಯಸ್ಥ ಅರೂಪ್‌ ರಾಹಾ  ಈ ವಿಷಯ ತಿಳಿಸಿದ್ದರು.ಬಳಿಕ ಸೇನೆಯ ಮೂರೂ ದಳಗಳ ಮುಖ್ಯಸ್ಥರೊಂದಿಗೆ ರಕ್ಷಣಾ ಮಂತ್ರಿ ಮನೋಹರ ಪರ್ರಿಕರ್‌ ಮಾತುಕತೆ ನಡೆಸಿದ್ದರು.
ಭಾರತೀಯ ವಾಯುಪಡೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಹಿಳಾ ಸಿಬ್ಬಂದಿ ಇದ್ದಾರೆ. ಈ ಪೈಕಿ ಹಲವರು ಪೈಲಟ್‌ಗಳು. ಅವರು ಸರಕು ಸಾಗಣೆ ವಿಮಾನ, ಹೆಲಿಕಾಪ್ಟರ್‌ಗಳ ಹಾರಾಟದಲ್ಲಿ ಭಾಗಿಯಾಗಿದ್ದಾರೆಯೇ ಹೊರತು ಯುದ್ಧ ವಿಮಾನಗಳ ಪೈಲಟ್‌ ಆಗಿ ಸೇವೆ ಸಲ್ಲಿಸಿಲ್ಲ.
ಈ ಪ್ರಕ್ರಿಯೆ ಪೂರ್ಣಗೊಳ್ಳಲು 3 ವರ್ಷ ಬೇಕಾಗಬಹುದು ಹೇಳಲಾಗಿದೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ