ಶುಕ್ರವಾರ, ಅಕ್ಟೋಬರ್ 23, 2015

ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಉದ್ಯೋಗ ಆಯ್ದುಕೊಳ್ಳಿ

      ಅತ್ಯಂತ ಮಹತ್ವಪೂರ್ಣವಾದದ್ದು. ಒಮ್ಮೆ ಮಾಡಿಕೊಂಡ ಆಯ್ಕೆ ಜೀವನದುದ್ದಕ್ಕೂ ನಮಗೆ ಅಂಟಿಕೊಂಡುಬಿಡುತ್ತದೆ.
ಭಾರತದಲ್ಲಿರುವ ಇನ್ನೊಂದು ವಿಶಿಷ್ಟ ವಿಚಾರವೇನೆಂದರೆ ಉದ್ಯೋಗ ಕ್ಷೇತ್ರವನ್ನು ಮಧ್ಯದಲ್ಲಿ ಬದಲಾಯಿಸಲು ಆಗದೇ ಇರುವಂತಹ ಪರಿಸ್ಥಿತಿ. ಒಮ್ಮೆ ಒಂದು ಉದ್ಯೋಗ ಕ್ಷೇತ್ರವನ್ನು ಪ್ರವೇಶಿಸಿದ ಬಳಿಕ ಕ್ಷೇತ್ರ ಇಷ್ಟವಾಗಲಿಲ್ಲ, ಆ ಕ್ಷೇತ್ರದಲ್ಲಿ ಸಫಲತೆ ಕಾಣಲಿಲ್ಲ, ಆರ್ಥಿಕ ವಿಪತ್ತುಗಳಿಂದಾಗಿ ಆ ಕ್ಷೇತ್ರದಲ್ಲಿ ಕುಸಿತವುಂಟಾಯಿತು, ಇತ್ಯಾದಿ ಕಾರಣಗಳಿಗೆ ಆಯ್ದುಕೊಂಡ ಕ್ಷೇತ್ರವನ್ನು ಬದಲಾಯಿಸಿಕೊಳ್ಳುವುದು ಕಷ್ಟಕರ. ಪ್ರತಿಯೊಂದು ಉದ್ಯೋಗಕ್ಕೂ ಆ ಕ್ಷೇತ್ರದ ಅನುಭವವೇ ಅತ್ಯಂತ ಮುಖ್ಯವಾದ ಅಂಶವಾಗಿದ್ದು, ಹೊಸ ಕ್ಷೇತ್ರಕ್ಕೆ ಬದಲಾಯಿಸಿಕೊಳ್ಳುವುದು ಸುಲಭವಲ್ಲ.
ಎಷ್ಟೋ ಜನ ನಡು ವಯಸ್ಸಿನಲ್ಲಿ ತಮ್ಮ ಕೆಲಸ ಕಳೆದುಕೊಂಡು ಬೇರೆ ಕೆಲಸ ಸಿಗದೆ ಒದ್ದಾಡುವವರೂ ಇದ್ದಾರೆ. ಹಾಗಾಗಿ ಉದ್ಯೋಗ ಕ್ಷೇತ್ರದ ಆಯ್ಕೆ ಭಾರತೀಯರ ಜೀವನದಲ್ಲಿ ಅತ್ಯಂತ ಮಹತ್ವಪೂರ್ಣವೂ ಹಾಗೂ ಒಂದು ರೀತಿಯಲ್ಲಿ ನಿರ್ಣಾಯಕವೂ ಆಗಿರುತ್ತದೆ. ಭವಿಷ್ಯದ ಉದ್ಯೋಗ ಕ್ಷೇತ್ರಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಹೇಗೆ.?ಈ ಕೆಳಗಿನ ಕೆಲವು ಅಂಶಗಳು ಮುಖ್ಯವಾಗುತ್ತವೆ. ನಿಮ್ಮ ಸಾಮಥ್ರ್ಯ, ಕೌಶಲ್ಯಾ ಹಾಗೂ ಭಾವನಾತ್ಮಕ ನೆಲೆಗಟ್ಟುಗಳನ್ನು ಸರಿಯಾಗಿ ಅಳೆದುಕೊಳ್ಳಿ. ಮತ್ತು ಅವು ಯಾವ ಕ್ಷೇತ್ರದ ಉದ್ಯೋಗಕ್ಕೆ ಸರಿಹೊಂದುತ್ತವೆ ಎನ್ನುವುದನ್ನು  ಕಂಡುಕೊಳ್ಳಿ.

ಕೇವಲ ದುಡ್ಡಿನ ಆಮಿಷದಿಂದ ಒಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಾರದು. ಅಂತಹ ಉದ್ಯೋಗದಲ್ಲಿ ನೆಮ್ಮದಿ ಇರಲಾರದು. ಕೆಲವರು ಮಾತನ್ನು ಬಂಡವಾಳವನ್ನಾಗಿರಿಸಿಕೊಂಡ ಉದ್ಯೋಗವನ್ನು ಇಷ್ಟಪಟ್ಟರೆ ಇನ್ನು ಕೆಲವರು ಮೌನವಾಗಿಯೇ ಡೆಸ್ಕ್ ಜಾಬ್‍ಮಾಡಲು ಇಷ್ಟಪಡುತ್ತಾರೆ. ಈ ರೀತಿಯಾಗಿ ನಿಮ್ಮ ವ್ಯಕ್ತಿತ್ವಕ್ಕೆ ಹೊಂದಿಕೊಳ್ಳುವ ಉದ್ಯೋಗ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಿ. ನೀವು ಆಯ್ದುಕೊಳ್ಳುವ ಕ್ಷೇತ್ರದ ದೀರ್ಘ ಕಾಲಾವಧಿಯ ಭವಿಷ್ಯ ಮತ್ತು ಅವಕಾಶಗಳ ಬಗ್ಗೆ ಸ್ಪಷ್ಟ ನಿಲುವು ತಿಳುವಳಿಕೆ ಇರಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ