ಮಂಗಳವಾರ, ನವೆಂಬರ್ 3, 2015

ಕೆಪಿಎಸ್ಸಿ ಸಂದರ್ಶನಕ್ಕೆ ಕನ್ನಡ ಪರೀಕ್ಷೆ ಪಾಸ್‌ ಕಡ್ಡಾಯ .

                                                                  
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮೂಲಕ ನಡೆಯುವ ನೇಮಕಾತಿಯಲ್ಲಿ ಗ್ರೂಪ್‌ ಎ ಮತ್ತು ಬಿ ಹುದ್ದೆ ಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾದರೂ ಸಂದರ್ಶನಕ್ಕೆ ಹಾಜರಾಗಬೇಕಾದರೆ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯ.
ಹೌದು, ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷ ಪಿ.ಸಿ.ಹೋಟಾ ನೇತೃತ್ವದ ಸಮಿತಿ ನೀಡಿರುವ ವರದಿ ಆಧರಿಸಿ ಕರ್ನಾಟಕ ನಾಗರಿಕ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆಗಳ
ಮೂಲಕ ನೇರ ನೇಮಕಾತಿ ಮತ್ತು ಆಯ್ಕೆ)(ಸಾಮಾನ್ಯ) ನಿಯಮ-2006ಕ್ಕೆ ತಂದಿರುವ ತಿದ್ದುಪಡಿಯ ಪ್ರಮುಖ ಅಂಶವಿದು.
ಅಲ್ಲದೆ, ಕೆಪಿಎಸ್‌ಸಿ ನಡೆಸುವ ಲಿಖೀತ ಪರೀಕ್ಷೆಯ ಮೌಲ್ಯಮಾಪನ ಮುಗಿಯುತ್ತಿದ್ದಂತೆ ಅಭ್ಯರ್ಥಿಗಳ ಹೆಸರನ್ನು ನೋಟಿಸ್‌ ಬೋರ್ಡ್‌ನಲ್ಲಿ ಪ್ರಕಟಿಸಬೇಕು. ಆದರೆ,
ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಬಹಿರಂಗಪಡಿಸುವಂತಿಲ್ಲ ಮತ್ತು ಸಂದರ್ಶನ ನಡೆಸುವವರಿಗೆ ಅದನ್ನು ತಿಳಿಸುವಂತಿಲ್ಲ.
ಸಂದರ್ಶನಕ್ಕೆ ನೀಡುವ ಅಂಕ ಗಳು ಸ್ಪರ್ಧಾತ್ಮಕ ಪರೀಕ್ಷೆಯ ಒಟ್ಟು ಅಂಕಗಳ ಶೇ. 12.5ನ್ನು ಮೀರುವಂತಿಲ್ಲ. ಇನ್ನು ಗ್ರೂಪ್‌ ಸಿ ಹುದ್ದೆಗಳಿಗೆ ಕಂಪ್ಯೂಟರ್‌ ಜ್ಞಾನ ಅಗತ್ಯ.
ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷ ಪಿ.ಸಿ.ಹೋಟಾ ನೇತೃತ್ವದ ಸಮಿತಿ ನೀಡಿರುವ ವರದಿ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ.
ರಾಜ್ಯ ಸರ್ಕಾರವು ಕರ್ನಾಟಕ ನಾಗರಿಕ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇರ ನೇಮಕಾತಿ ಮತ್ತು ಆಯ್ಕೆ)(ಸಾಮಾನ್ಯ)(ತಿದ್ದುಪಡಿ) ನಿಯಮ-2015ರ ಕರಡು ಪ್ರಕಟಿಸಿದ್ದು, ಗ್ರೂಪ್‌ ಎ, ಬಿ, ಸಿ ಮತ್ತು ಡಿ ವರ್ಗದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹಲವು ಬದಲಾವಣೆಗಳನ್ನು ಮಾಡಲಾಗಿದೆ.
ಸಂದರ್ಶನ ಅಂಕ 25 ಮೀರುವಂತಿಲ್ಲ: ಅಭ್ಯರ್ಥಿಗಳ ಆಯ್ಕೆಗೆ ತಲಾ ನೂರು ಅಂಕಗಳ ಸಾಮಾನ್ಯ ಜ್ಞಾನ ಮತ್ತು ಸಂಬಂಧಿಸಿದ ಇಲಾಖೆ ವಿಚಾರಗಳ ಕುರಿತ ಪ್ರಶ್ನೆಗಳನ್ನೊಳಗೊಂಡ ಎರಡು ಸ್ಪರ್ಧಾತ್ಮಕ ಪರೀಕ್ಷೆ (ಒಟ್ಟು200 ಅಂಕಗಳಿಗೆ) ನಡೆಸಲಾಗುತ್ತದೆ. ಸರಿಯುತ್ತರಕ್ಕೆ ಅಂಕ ನೀಡುವುದರ ಜತೆಗೆ ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ಕಡಿತಗೊಳಿಸಲಾಗುತ್ತದೆ. ಲಿಖೀತ ಪರೀಕ್ಷೆಯ ಮೌಲ್ಯಮಾಪನ ಮುಗಿದ ಬಳಿಕ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿ ಭರ್ತಿ ಮಾಡಬೇಕಾದ ಖಾಲಿ ಹುದ್ದೆಗಳಿಗೆ ಅನುಸಾರವಾಗಿ 1ಕ್ಕೆ3ರಷ್ಟು ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಯ್ಕೆ ಮಾಡಬೇಕು. ಈ ಸಂದರ್ಭದಲ್ಲಿ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಗಳಿಸಿದ ಅಂಕಗಳನ್ನು ಬಹಿರಂಗಪಡಿಸುವಂತಿಲ್ಲ ಅಥವಾ ಸಂದರ್ಶನ ನಡೆಸುವವರಿಗೆ ಅಂಕಗಳನ್ನು ತಿಳಿಸುವಂತಿಲ್ಲ. ಸಂದರ್ಶನದಲ್ಲಿ ಅಭ್ಯರ್ಥಿಗಳಿಗೆ ನೀಡುವ ಗರಿಷ್ಠ ಅಂಕ ಸ್ಪರ್ಧಾತ್ಮಕ ಪರೀಕ್ಷೆಯ ಒಟ್ಟು ಅಂಕಗಳ ಶೇ. 12.5ನ್ನು (200ಕ್ಕೆ 25 ಅಂಕ) ಮೀರುವಂತಿಲ್ಲ. ಸಂದರ್ಶನದ ಬಳಿಕ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಬೇಕು.

ಗ್ರೂಪ್‌ ಸಿ ನೌಕರರ ನೇಮಕಾತಿ: ಗ್ರೂಪ್‌ ಸಿ ಹುದ್ದೆಗಳ ಭರ್ತಿ ಸಂದರ್ಭದಲ್ಲಿ ತಲಾ 100 ಅಂಕಗಳ ಎರಡು ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ.
ಅದೇ ರೀತಿ ಗ್ರೂಪ್‌ ಸಿ ವಿಭಾಗದ ಚಾಲಕರು ಮತ್ತು ಗ್ರೂಪ್‌ ಡಿ ಹುದ್ದೆಗಳಿಗೆ ನೇಮಕಾತಿ ಪ್ರಾಧಿಕಾರವು ಅರ್ಹತಾ ಪರೀಕ್ಷೆ ನಡೆಸಿ ಬಳಿಕ ಮೆರಿಟ್‌ ಆಧಾರದ ಮೇಲೆ ಆಯ್ಕೆ ಪಟ್ಟಿ ಪ್ರಕಟಿಸಬೇಕು.

150 ಅಂಕದ ಕನ್ನಡ ಪರೀಕ್ಷೆ
ಸರ್ಕಾರದ ವಿವಿಧ ಇಲಾಖೆಗಳ ತಾಂತ್ರಿಕಮತ್ತು ತಾಂತ್ರಿಕೇತರ ಗ್ರೂಪ್‌ ಎ ಮತ್ತು ಬಿ ಹುದ್ದೆಗಳಿಗೆ ನೇರ ನೇಮಕಾತಿ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಅಭ್ಯರ್ಥಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಎಷ್ಟೇ ಅಂಕ ಗಳಿಸಿರಲಿ ಸಂದರ್ಶನಕ್ಕೆ ಆಯ್ಕೆಯಾಗ ಬೇಕಾದರೆ ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆ ಆಗಿರಬೇಕು.
ಇದ್ಕಕಾಗಿ ಅಭ್ಯರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಮಟ್ಟದಲ್ಲಿ ಪ್ರಥಮ ಭಾಷೆ ಕನ್ನಡಕ್ಕೆ ಸರಿಸಮಾನಾದ 150 ಅಂಕಗಳ ಪರೀಕ್ಷೆ ಇಡಬೇಕು.
ಅದರಲ್ಲಿ ಅರ್ಹತೆ ಗಳಿಸಬೇಕಾದರೆ ಕನಿಷ್ಠ 50 ಅಂಕ ಗಳಿಸಿರಬೇಕು. ಒಂದು ವೇಳೆ ಯಾವುದಾದರೂ ಅಭ್ಯರ್ಥಿಗೆ ಆಯೋಗ ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದಕ್ಕೆ ವಿನಾಯಿತಿ ನೀಡಬೇಕಾದರೆ ಆತ ಎಸ್ಸೆಸ್ಸೆಲ್ಸಿ ಅಥವಾ ಅದಕ್ಕಿಂತ ಮೇಲ್ಮಟ್ಟದ ಪರೀಕ್ಷೆಯಲ್ಲಿ ಕನ್ನಡವನ್ನು ಪ್ರಧಾನ ಭಾಷೆಯಾಗಿ ಆಯ್ಕೆ ಮಾಡಿಕೊಂಡು ತೇರ್ಗಡೆಯಾಗಿರಬೇಕು.ಇಲ್ಲವೇ, ಕೆಪಿಎಸ್‌ಸಿ ಹಿಂದೆ ನಡೆಸಿದ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣ ನಾಗಿರಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ